Friday, March 28, 2014

ONE DAY IN A BMTC BUS.....(real incident)

 
 

 
                        I rarely commute by the BMTC bus mainly due to time constraint & I need to take at least two buses to reach home from any part of the city. Other tertiary reasons being my perennial problem of nausea during a journey and the heavy crowd in the bus which suffocates me,
 
        A common grouse among people commuting regularly by BMTC buses is that they don't get back the small change that is due to them when they buy a ticket. Either the bus conductor asks them for a 1 Re or 2 Rs coin which the passengers cant fish out from their pockets or purses while they are doing a balancing act in the speeding bus or writes the amount due to them behind the ticket. Out of these , few people forget to ask back the change and few others start looking for the change asked by the conductor to avoid losing a bigger amount. Few people keep reminding the conductor for the money due to them at every given chance until they reach their destination.
 
       On one such occasion, I just decided to travel by the BMTC bus, come what may. So, took a bus from BMTC bus Hebbal to KempeGowda Bus Station. I thought "Oh good. First part of the journey is okay".  The second bus that I boarded had very few vacant seats and was about to leave when I hopped onto it. The thought that crossed my mind was ' If buses were this vacant and some fresh air circulated all the time, BMTC bus is the cheap and best mode of transport as compared to the autorickshaws.
 
      Being lost in my own world, I never realized that we had reached Vidhana Soudha Bus stop. Suddenly there was some commotion in the bus. A young college student was arguing with the bus conductor that she had given him a 50 Rs note and he owed her Rs 35.  The conductor asked for the ticket, turned it over and said since he had not indicated any amount to be returned on the ticket, he didn't owe her anything. An argument ensued between the commuters. Some favouring the conductor and quite a few favouring the student ( she was a pretty young girl you see :) . Both of them stuck to their ground . The bus was stopped & I thought "OMG why ever did I think of taking a bus today?". Some elderly person advised the conductor to be a little patient and remember if he had by any chance forgotten to write the amount on the ticket.
 
    Some commuters kept on babbling " these conductors make quite some profit by cheating us on the small change" and the conductor was visibly irritated at these comments. However, paying heed to the elderly person's words, he took the ticket from the girl and started checking. Suddenly he almost shouted at the commuters who spoke in support of the girl " This girl is not only cheating me but also you people ". This ticket is not issued today, let alone in this bus. The girl kept arguing that he himself had issued it. The conductor took some time to prove to the people who spoke in the girl's favour that the ticket was not issued by him. By then, the girl had silently got down and walked away.
 
     I was so damn taken aback. How could somebody behave in such a manner only for a few Rupees? It was utterly disgusting. But there were people who remarked loudly that for the first time, they had come across a person who could give back the erring BMTC conductors in their own coin.
 
Tara Shylendra
 

Wednesday, March 26, 2014

ಬೆಂಗಳೂರಿಗರ ಧಾವಂತದ ಬದುಕು (article)

 





 
"ಅಂದದೂರು ಬೆಂಗಳೂರು , ಆನಂದದ ತವರೂರು" ಎಂಬ ಹಾಡು ಜನಪ್ರಿಯ . ಹಾಗೆಯೇ ಸಿಲಿಕಾನ್ ಸಿಟಿ , ಉದ್ಯಾನನಗರಿ, ಉದ್ಯೋಗನಗರಿ ಎಂಬ ಕೀರ್ತಿಯು ಇದೆ. ಇಲ್ಲಿಯ ಹವೆ ಎಲ್ಲರಿಗು ಪ್ರಿಯ . ಆದ್ದರಿಂದಲೇ ದೇಶದ ಎಲ್ಲೆಡೆಯಿಂದ ಅಷ್ಟೇಕೆ ವಿದೇಶಗಳಿಂದಲೂ ಜನ ಇಲ್ಲಿಗೆ ವಲಸೆ ಬಂದು, ಕನ್ನಡಿಗರ ವಿಶಾಲ ಮನೋಭಾವದಿಂದ ಇಲ್ಲಿಯವರೇ ಆಗಿ ಉಳಿದುಬಿಟ್ಟಿದ್ದಾರೆ.
    ಹಿಂದೆ ಬೆಂಗಳೂರು ಆನಂದಮಯವಾಗಿಯೇ ಇತ್ತು. ಜನರೂ ಸಹ ಜೀವನೋಪಾಯಕ್ಕಾಗಿ ಉದ್ಯೋಗ ಮಾಡುತ್ತಿದ್ದರು. ಬಂದ ಸಂಬಳ ತಿಂಗಳ ಖರ್ಚು ಕಳೆದ ಮೇಲೂ ಅಲ್ಪ ಸ್ವಲ್ಪ ಉಳಿತಾಯವಾಗುತ್ತಿತ್ತು . ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ನೆಮ್ಮದಿ ಇತ್ತು. ನಾವು ಅಲ್ಪ ತೃಪ್ತರಾಗಿದ್ದೆವು. ಬರು ಬರುತ್ತಾ I .T  ಕಂಪೆನಿಗಳು ತಲೆ ಎತ್ತಿದವು . ಜನರ ಆದಾಯ ಹೆಚ್ಚಾಯಿತು . ಕೊಳ್ಳುಬಾಕತನ ಬೆಳೆಯುತ್ತಾ ಹೋಯಿತು . ಸ್ವಪ್ರತಿಷ್ಠೆ, ಪೈಪೋಟಿ ಮೇರೆ ಮೀರಿತು. ಈ ಎಲ್ಲದರ ನಡುವೆ ನಲುಗಿ ಹೋಗಿದ್ದು ಸಾಮಾನ್ಯ ಜನರ ನೆಮ್ಮದಿ . ಯಾರೋ ಏನೋ ಕೊಂಡರೆಂದು ಮಧ್ಯಮ ವರ್ಗದ ಜನರೂ ಸಹ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಅನಾವಶ್ಯಕವಾಗಿ ಐಷಾರಾಮದ ಜೀವನದ ಆಸೆಗೆ ಬಿದ್ದು ಕಂತುಗಳಲ್ಲೋ, ಸಾಲ ಮಾಡಿಯಾದರೋ ಹುಚ್ಚಾಪಟ್ಟೆ ಖರೀದಿ ನಡೆಸಲಾರಂಭಿಸಿದರು . ಇವರಿಗೆ ಬೆಂಬಲವಾಗಿ ನಿಂತಿದ್ದು ಸಾಲ ನೀಡುವ ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು . ಪ್ರತಿಯೊಂದು ವಸ್ತುವಿನ ಬೆಲೆಯೂ ತುಟ್ಟಿಯಾಗಿರುವ ಈ ಕಾಲದಲ್ಲಿ ಮನೆಖರ್ಚು, ಮಕ್ಕಳ ವಿದ್ಯಾಭ್ಯಾಸದ ಖರ್ಚು , ಜೊತೆಗೆ ಈ ಸಾಲದ ಕಂತಿನ ಮರುಪಾವತಿ ಜನ ಸಾಮಾನ್ಯನನ್ನು ನಡುಗಿಸಿತು .
         
     ಸ್ತ್ರೀ ಸಬಲೀಕರಣ ಎಂದರೆ ಆರ್ಥಿಕ ಸ್ವಾವಲಂಬನೆಯಷ್ಟೇ ಎಂದು ಅನೇಕರು ನಂಬಿದರು. ಹೆಣ್ಣು ಮಕ್ಕಳೂ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮನೆಯ ಒಳ-ಹೊರಗೆ ದುಡಿಯಲು ಆರಂಭಿಸಿದರು. ಬಹಳಷ್ಟು ಮಹಿಳೆಯರು ಸ್ವ-ಉದ್ಯೋಗ ಮಾಡುತ್ತಾ ಮನೆಯನ್ನೂ ಸಂಭಾಳಿಸುತ್ತಿದ್ದಾರೆ. ಲಕ್ಷಾಂತರ ಮಹಿಳೆಯರು ಹೊರಗೆ ದುಡಿಯಲು ಹೋಗುತ್ತಾರೆ . ಅವರು ಪ್ರತಿ ನಿಮಿಷವೂ ಮಾನಸಿಕ ಒತ್ತಡದಲ್ಲಿರುತ್ತಾರೆ.  ಯಾವುದೇ ಉದ್ಯೋಗಸ್ಥ ಮಹಿಳೆಯ ದಿನಚರಿಯನ್ನು ಗಮನಿಸಿದರೆ , ಅವಳಿಗೆ ತನ್ನದು ಎಂಬ ಸಮಯ ಸಿಗುವುದು ಕಷ್ಟ . ಬೆಳಿಗ್ಗೆ ೪.೩೦-೫ ಗಂಟೆಗೆ ಎದ್ದರೆ, ರಾತ್ರಿ ಮಲಗುವ ವೇಳೆಗೆ ೧೧-೧೨ ಆಗುತ್ತದೆ. ಬೆಳಿಗ್ಗೆ ಎದ್ದು ಮನೆಕೆಲಸ , ಮಕ್ಕಳನ್ನು ಶಾಲೆಗೆ ಹೊರಡಿಸುವುದು , ಸಮಯ ಸಿಕ್ಕರೆ ತಿಂಡಿ ತಿನ್ನುವುದು . ಇಲ್ಲದಿದ್ದರೆ ಹಾಗೆಯೇ ಬಸ್ ಗಾಗಿ ಓಡುವುದು. BMTC  ಬಸ್ ಏನು ಇವರಿಗಾಗಿ ಕಾಯುತ್ತದೆಯೇ? ಬಸ್ ಸಿಗದ ದಿನ ಆಟೋ ಮೊರೆ ಹೋಗಬೇಕು . ಅವರೇನು ಸಾಮಾನ್ಯರೇ ? ನಾವು ಹೋಗಬೇಕಾದ ದಿಕ್ಕನ್ನು ಬಿಟ್ಟು, ಬೇರೆ ಎಲ್ಲಿಗಾದರೂ ಸೈ. ಇಷ್ಟೆಲ್ಲಾ ಹೆಣಗಾಡಿ ಆಫೀಸು ಸೇರಿದರೆ , ಮೇಲಧಿಕಾರಿಯ ಮೊನಚಾದ ಮಾತು, ಸಹೋದ್ಯೋಗಿಗಳ ವ್ಯಂಗ್ಯ ನುಡಿಗಳು . "ನಾವು ಪುರುಷರಿಗೆ ಸಮಾನರು , ಯಾರಿಗೇನೂ ಕಡಿಮೆ ಇಲ್ಲ ಎನ್ನುವ ನೀವು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರಬೇಕು. ಅಂದಿನ ಕೆಲಸ ಅಂದೇ ಮುಗಿಸಿ ಹೋಗಬೇಕು " ಎಂದು ಕಟಕಿಯಾಡುತ್ತಾರೆ.

      ಸಂಜೆ ಪುನಃ ಬಸ್, ಆಟೋ ಹಿಡಿದು ಮನೆ ಸೇರಿದರೆ, ೫ ನಿಮಿಷ ಕೂರುವಷ್ಟು ಮನಸ್ಸಿರುವುದಿಲ್ಲ. ಮನೆಕೆಲಸ, ಮಕ್ಕಳ ಓದು, ರಾತ್ರಿ ಅಡುಗೆ , ಮನೆಯವರೆಲ್ಲರ ಯೋಗಕ್ಷೇಮ - ಹೀಗೆ ಪ್ರತಿಯೊಂದು ವಿಷಯದ ಕಡೆಗೆ ಗಮನ ಹರಿಸಬೇಕಾಗುತ್ತದೆ. ಸಣ್ಣ ವಯಸ್ಸಿನ ಮಕ್ಕಳಿದ್ದು , ಮನೆಯಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲದಿದ್ದರೆ, ಆ ಮಗುವಿಗೆ ತಿಂಡಿ, ಊಟ, ನೀರು, ಹಣ್ಣು , ಆರೋಗ್ಯ ಸರಿ ಇಲ್ಲದಿದ್ದರೆ, ಔಶಧ ಸಕಲವನ್ನೂ ಜೋಡಿಸಿಕೊಂಡು "DAY CARE"ನವರಿಗೆ ಕೊಟ್ಟು , ಅಳುವ ಮಗುವನ್ನು ಅವರಿಗೆ ಒಪ್ಪಿಸಿ, ಪುನಃ ಸಂಜೆ ಮನೆಗೆ ಹಿಂದಿರುಗುವಾಗ ಮಗುವನ್ನು ಕರೆದುಕೊಂಡು ಬಂದು , ಅದಕ್ಕೆನಾದರು ತಿನ್ನಿಸಿ, ತಾನು ಉಸಿರು ಬಿಡುವಷ್ಟರಲ್ಲಿ ಹೊರೆ ಕೆಲಸ ಕಾದಿರುತ್ತದೆ. ಉದ್ಯೋಗಸ್ಥ ಮಹಿಳೆಗೆ ತಾನು ಮಕ್ಕಳಿಗೆ ಹಾಗೂ ಮನೆಯವರಿಗೆ ಸಾಕಷ್ಟು ಸಮಯ ನೀಡಲಾಗುತ್ತಿಲ್ಲ ಎಂಬ ಕೊರಗಿರುತ್ತದೆ. ಈ ಕೊರತೆಯನ್ನು ನೀಗಿಸುವ ಪ್ರಯತ್ನದಲ್ಲಿ ಅವಳು ತನ್ನ ಆರೋಗ್ಯದ ಕಡೆಗೂ ಗಮನ ಕೊಡದೆ ದುಡಿಯುತ್ತಾಳೆ. ಇದರ ಪರಿಣಾಮವಾಗಿ ನಿತ್ರಾಣ, ರಕ್ತಹೀನತೆಯಿಂದ ಬಳಲುತ್ತಾಳೆ . ಭಾರತದಲ್ಲಿ ಬಹಳಹ್ಟು ಮಹಿಳೆಯರಲ್ಲಿ ರಕ್ತಹೀನತೆ ಸಾಮಾನ್ಯವಾಗಿದೆ. ಉದ್ಯೋಗಸ್ಥ ಮಹಿಳೆಗೆ ತನ್ನ ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಮನೆಯ ಒಳ-ಹೊರಗೆ ದುಡಿಯುವ ಅವರಿಗೆ ಮನೆಯವರ ಸಹಕಾರ ಇಲ್ಲದಿದ್ದರೆ ಬಹಳ ಕಷ್ಟವಾಗುತ್ತದೆ.

ಇತ್ತೀಚೆಗೆ ಮಕ್ಕಳು ಸ್ಥೂಲ ಕಾಯದವರಾಗುತ್ತಿದ್ದು, ಅತಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹದಂಥ ರೋಗಕ್ಕೆ ಬಲಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅದರ ಹಿಂದಿನ ಕಾರಣಗಳನ್ನು ಗಮನಿಸಿದರೆ, ನಮ್ಮ ಧಾವಂತದ ಬದುಕು ನಮ್ಮನ್ನು ಎತ್ತ ಸಾಗುವಂತೆ ಮಾಡುತ್ತಿದೆ ಎಂದು ತಿಳಿಯುತ್ತದೆ. ಪತಿ-ಪತ್ನಿ ಇಬ್ಬರೂ ದುಡಿಯಲು ಹೋಗಬೇಕಾದ್ದರಿಂದ ಮಕ್ಕಳ ಕಡೆಗಿನ ಗಮನ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಬೇಕರಿ ತಿಂಡಿ ತಿನ್ನುತ್ತಾ ದೂರದರ್ಶನದ ಮುಂದೆ ಕೂರುವುದು ರೂಢಿಯಾಗಿ , ಹೊರಗೆ ಆಡಲು ಹೋಗುವುದೇ ಮರೆತುಹೋಗಿದೆ . ಜೊತೆಗೆ ಗಣಕಯಂತ್ರದ ಮುಂದೆ ಆಟವಾಡುತ್ತಾ ಗಂಟೆಗಟ್ಟಲೆ ಕುಳಿತು, ಮಕ್ಕಳ ಬೊಜ್ಜು ಬೆಳೆಯುತ್ತಿದೆ . ಅದನ್ನು ಇಳಿಸಲು ಜಿಮ್ ಗಳ ಮೊರೆ ಹೋಗುತ್ತಿದ್ದಾರೆ . I.T.ನಗರಿ ಎಂದೂ ಖ್ಯಾತವಾಗಿರುವ ಬೆಂಗಳೂರು, ಟೆಕಿ ಗಳ ಬದುಕನ್ನು ನಾಶ ಮಾಡುತ್ತಿದೆ. ಬೆಳಿಗ್ಗೆ ಸೂರ್ಯ ಕಣ್ಣು ಬಿಡುವಾಗ ಮನೆ ಬಿಡುವ ಇವರು ರಾತ್ರಿ ಮನೆ ಸೇರುವ ವೇಳೆಗೆ ಚಂದ್ರನೂ ನಿದ್ದೆಗೆ ಜಾರಿರುತ್ತಾನೆ. ವಾರವಿಡೀ ಬರೀ ದುಡಿಮೆಯೆಂದೇ ನಂಬಿರುವ ಇವರು ವಾರಾಂತ್ಯದಲ್ಲಿ ಇಡೀ ವಾರದ ಮೋಜನ್ನು ಅನುಭವಿಸಬೇಕೆಂದು ಕಾತರದಿಂದ ಕಾಯುತ್ತಿರುತ್ತಾರೆ.

ಈ ಟೆಕಿ ಗಳ ಜೀವನದಲ್ಲಿ ಸಾಮಾನ್ಯವಾದ ಪದಗಳನ್ನು ನೋಡಿ - SINK (Single Income No Kids), DINK(Double Income No Kids).   ಇವರು ಬರೀ ದುಡಿಯುವುದಕ್ಕಾಗೇ ಬಾಳುವವರು . ಎಷ್ಟೋ ಮಹಿಳೆಯರು ಮಾತೃತ್ವವನ್ನು ಮುಂದೆ ಹಾಕುತ್ತಾರೆ. ಇದಕ್ಕೆ ಕಾರಣ - ಇವರಿಗೆ ಮನೆ, ಮಕ್ಕಳು, ಕೆಲಸ ಮೂರನ್ನೂ ಸಂಭಾಳಿಸುವುದು ಕಷ್ಟ ಎನಿಸಿ , ಕೆಲವು ವರ್ಷ ಬರೀ ಹಣ ಸಂಪಾದನೆ ಮಾಡಿ, ಅಮೇಲೆ ಮಗುವನ್ನು ಹೆರಬಹುದು ಎಂಬ ಭಾವನೆ ಇರುತ್ತದೆ. ಜೊತೆಗೆ ತಮ್ಮ ಮಗುವನ್ನು ತಮ್ಮ ಸ್ವಂತ ಮನೆಗೆ, ಅದರಲ್ಲೂ ಪ್ರತಿಯೊಂದು ಐಷಾರಾಮ ಇರುವ ಮನೆಗೇ ಸ್ವಾಗತಿಸಬೇಕೆಂಬ ಬಯಕೆ ಇರುತ್ತದೆ. ಆದರೆ ಸೃಷ್ಟಿ ನಿಯಮ ಯಾರಿಗೆ ಕಾಯುತ್ತದೆ? ಮಾತೃತ್ವ ಮುಂದೂಡುವ ಕೆಲವು ಮಹಿಳೆಯರಿಗೆ ಅವರಿಗೆ ಬೇಕೆಂದಾಗ ಮಕ್ಕಳ ಭಾಗ್ಯ ಇರುವುದಿಲ್ಲ . ಇದರಿಂದ ಮಾನಸಿಕ ಒತ್ತಡ , ಮನೆಯಲ್ಲಿ ಕಿರಿಕಿರಿ, ಆರೋಗ್ಯ ಹಾಳು ಹಾಗೂ ಅನೇಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ , ನೆಮ್ಮದಿ ಕಳೆದುಕೊಳ್ಳುತ್ತಾರೆ.

ಈ ಟೆಕಿ ಗಳ ಪ್ರಧಾನ ಸಮಸ್ಯೆ ಅನಾರೋಗ್ಯ. ದಿನವಿಡೀ ಗಣಕಯಂತ್ರದ ಮುಂದೆ ಕೂರುವ ಇವರಿಗೆ ಬೆನ್ನು ನೋವು, ಸ್ನಾಯುಗಳ ಸೆಳೆತ , ಕಣ್ಣುರಿ, ತಲೆ ಸಿಡಿತ ಇತ್ಯಾದಿ ಕಾಣಿಸಿಕೊಳ್ಳುತ್ತವೆ. ಯಾವುದೇ ವ್ಯಾಯಾಮವಿಲ್ಲದ ಕಾರಣ ಬೊಜ್ಜು ಬೆಳೆಯುತ್ತದೆ. ಅದರಿಂದಾಗಿ ಅನೇಕ ಖಾಯಿಲೆಗಳು ಬೇಡದ ಅತಿಥಿಗಳಾಗಿ ಬರುತ್ತವೆ. ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿರುವ ಯುವಜನತೆಯಿಂದಾಗಿ ಮನೆಯಲ್ಲಿ ಆಂತರಿಕ ಕಲಹಗಳು ಹೆಚ್ಚಾಗಿವೆ. ವಿವಾಹ ವಿಚ್ಛೇದನಗಳು, ಆತ್ಮಹತ್ಯೆ ಪ್ರಕರಣಗಳೂ ಹೆಚ್ಚಿವೆ.

    ಈಗಂತೂ ಬೆಂಗಳೂರಿನಲ್ಲಿ ದಿನದ ೨೪ ಗಂಟೆಗಳೂ ವಾಹನದ ದಟ್ಟಣೆಯಿದ್ದು , ಮನೆ ಸೇರಿದರೆ ಸಾಕಪ್ಪಾ ಎಂದು ಪ್ರತಿಯೊಬ್ಬರೂ ಧಾವಂತದಲ್ಲಿರುತ್ತಾರೆ.  ಕೆಟ್ಟ ರಸ್ತೆಗಳಿಂದ ಅಪಘಾತಗಳೂ ಹೆಚ್ಚಿವೆ. ಆಗಾಗ ಆಗಮಿಸುವ ಅತಿಥಿಗಣ್ಯರು,  ಮಂತ್ರಿ ವರೇಣ್ಯರಿಗಾಗಿ ಗಂಟೆಗಟ್ಟಲೆ ಸಂಚಾರ ತಡೆಗಳಿದ್ದು ಜನರ ತಾಳ್ಮೆಯನ್ನು ಪರೀಕ್ಷಿಸುತ್ತವೆ. ಧಿಡೀರ್ ಮುಷ್ಕರಗಳಿಂದ ಬಸ್, ಆಟೋ ಗಳಿಲ್ಲದೆ , ಕೆಲವು ಬಾರಿ ಮನೆಗೆ ನಡೆದೇ ಹೋಗಬೇಕಾದ ಸಂದರ್ಭಗಳು ಬರುತ್ತವೆ . ಬೆಂಗಳೂರಿನಲ್ಲಿರುವ ಅನೇಕ ಮೇಲುಸೇತುವೆಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ದುರವಸ್ಥೆಯಲ್ಲಿರುವುದಲ್ಲದೆ, ವಾಹನ ಸಂಚಾರದ ದಟ್ಟಣೆಯನ್ನು ಕಡಿಮೆ ಮಾಡುವ ಬದಲಿಗೆ ಹೆಚ್ಚು ಮಾಡುತ್ತಿವೆ. ಜನರಲ್ಲಿ ಸಹನೆ, ತಾಳ್ಮೆ , ಮಾನವೀಯತೆ ಮರೆಯಾಗುತ್ತಿದೆ ಎಂಬುದಕ್ಕೆ ನಿದರ್ಶನವೆಂದರೆ ತುರ್ತು ಪರಿಸ್ಥಿತಿಯಲ್ಲಿಯೂ ಸಹ ಆಂಬುಲೆನ್ಸ್ ಗೆ ದಾರಿ ಮಾಡಿ ಕೊಡದಿರುವುದು. ಅದರ ಘಂಟೆಯ ಸದ್ದು ಕೇಳುತ್ತಿದ್ದರೂ ಸಹ ಕೆಲ ವಾಹನ ಚಾಲಕರು ದಾರಿಯೇ ಬಿಡುವುದಿಲ್ಲ. ಮತ್ತೆ ಕೆಲವರು ಮುಂದಿರುವ ವಾಹನಗಳು ಆಂಬುಲೆನ್ಸ್ ಗೆ ದಾರಿ ಮಾಡಿ ಕೊಟ್ಟರೆ, ಇವರೂ ಸಹ ಅದರ ಹಿಂದೆಯೇ ನುಗ್ಗುವ ಆತುರ ತೋರುತ್ತಾರೆ.
   
  ವಾಹನ ನಿಲುಗಡೆಯೋ ಬೆಂಗಳೂರಿಗರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ . ಎಲ್ಲೇ ಹೋಗಬೇಕೆಂದರೂ , ಮೊದಲು ನಿಲುಗಡೆಗೆ ಅವಕಾಶವಿದೆಯೇ ಎಂದು ನೋಡಿ , ನಂತರ ಹೋಗಬೇಕು. ಕೆಲವು ಬಾರಿ ನಿಲುಗಡೆ ಪ್ರದೇಶದಿಂದ ಬಹಳ ದೂರ ನಡೆದು ಹೋಗಬೇಕು. ನಿಲುಗಡೆ ಶುಲ್ಕ ವಸೂಲಿ ಮಾಡುವ ಜನ ನಮ್ಮ ವಾಹನವನ್ನು ಕಾಯಬೇಕೆಂಬ ನಿಯಮವೇನೂ ಇಲ್ಲ. ಶುಲ್ಕ ವಸೂಲಿಯಷ್ಟೇ ಅವರ ಕೆಲಸ. ಉಳಿದಂತೆ ವಾಹನ ನಮ್ಮ ಜವಾಬ್ದಾರಿ . ಒಟ್ಟಿನಲ್ಲಿ ಬೆಂಗಳೂರು ಮುಂಬಯಿ ಮಾದರಿಯ ಮಹಾನಗರಿ ಆಗುತ್ತಿರುವ ಲಕ್ಷಣಗಳು ಕಾಣುತ್ತಿವೆ.

ಬೆಂಗಳೂರಿನ ಜ್ವಲಂತ ಸಮಸ್ಯೆ ಎಂದರೆ ನೀರು ಪೂರೈಕೆ . ಬೇಸಿಗೆಯಲ್ಲಂತೂ ನಲ್ಲಿಯಲ್ಲಿ ನೀರಿನ ಬದಲು ಬರೀ ಗಾಳಿ ಬರುತ್ತದೆ. ಕೆಲವು ಕಡೆ ಕಲುಷಿತ ನೀರು ಸರಬರಾಜು ಆಗುತ್ತಿದೆ. ಮತ್ತೆ ಕೆಲವೆಡೆ ನೀರಿನಲ್ಲಿ ಹುಳುಗಳು ಕಂಡಿವೆ. ಆದರೆ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ದಿವ್ಯ ಮೌನ ತಾಳುತ್ತದೆ. ಇಂಥ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭಯ ಇದ್ದರೂ ಮುಂಜಾಗರೂಕತೆ ವಹಿಸುವುದಿಲ್ಲ.

  ಈಗೀಗ ಗಗನಕ್ಕೇರುತ್ತಿರುವ ಬೆಲೆಗಳು , ಅದರಿಂದಾಗಿ ಹೆಚ್ಚುತ್ತಿರುವ ಹಣದ ಅವಶ್ಯಕತೆ, ಅದರಿಂದ ಹೆಚ್ಚಿನ ದುಡಿತ , ಹೆಚ್ಹೆಚ್ಚು ಮಾನಸಿಕ ಒತ್ತಡ ಇವೆಲ್ಲದರಿಂದ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಂಗಳೂರಿಗರ ಜೀವನದ ಮಟ್ಟ ಕುಸಿಯುತ್ತಿದೆ. ತಾವು ಪ್ರೀತಿಸುವ ಹವ್ಯಾಸಗಳಿಗೆ ಸಮಯ ಹೊಂದಿಸಲು ಕಷ್ಟ ಪಡುವಂತಾಗಿದೆ. ಕುಟುಂಬದ ಜವಾಬ್ದಾರಿ ಹಾಗೂ ವೃತ್ತಿ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಹಗ್ಗದ ಮೇಲೆ ನಡೆಯುವಂತೆ ಆಗಿದೆ.  ಮೆಟ್ರೋ ಯೋಜನೆ ಸಂಪೂರ್ಣ ಯಶಸ್ವಿಯಾದರೆ, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಮಾಲಿನ್ಯ ಕಡಿಮೆಯಾಗಿ, ಆರೋಗ್ಯವೂ ಸುಧಾರಿಸುತ್ತದೆ. ಆದರೆ ವ್ಯಕ್ತಿಯ ಮಾನಸಿಕ ಆರೋಗ್ಯ ಮಾತ್ರ ಅವನು ತೆಗೆದುಕೊಳ್ಳುವ ನಿರ್ಧಾರಗಳು ಹಾಗೂ ಜೀವನದಲ್ಲಿ ತನಗೆ ಏನು ಮುಖ್ಯ ಹಾಗೂ ಅವಶ್ಯಕ ಎಂಬ ಸತ್ಯವನ್ನು ಅರಿತು ನಡೆಯುವುದರ ಮೇಲೆ ಅವಲಂಬಿಸಿದೆ.


- ತಾರಾ ಶೈಲೇಂದ್ರ
     

Tuesday, March 25, 2014

ROLE MODEL(article)

                                                    

     Was listening to FM Radio in the evening while commuting from work place to home. The RJ was asking listeners to SMS the name of the person who they think is their role model in life.  The RJ was reading out the messages sent in by the listeners. The role models were many ranging from Abdul Kalaam to Film personalities to cricketers to Pop stars.
This set me thinking. Do we need a role model better than our parents? They are the ones that we see from when we remember the world.

    They've given birth to us. Brought us up with great pains and sacrifice. Spent sleepless nights to look after us when we were uncomfortable. Fed, clothed and educated us. Probably not all our dreams have come true. But they have done their best for us. No doubt all the above mentioned famous personalities are great in their own way. But then, therez only one Abdul Kalaam or one Mother Teresa. We can only try to inculcate a few values of these great people becoz each person is unique.

    Once, in a technical interview, after all the questions were done with, one of the committee members asked me "who is your role model in life and why?" I replied "My parents". Wonder what was so amusing to the panel. They all started laughing and one person asked me " what is this? we thought you would mention some great personality".  It really hurt me. I replied " great personalites are for the whole world. But to me, my parents are the World Sir".  He asked why it was so to which I replied "My parents have given birth to me. Instilled morals, ethics and values in me. They have been honest and are contributing in their own way to the society. What else is required in a role model Sir? Every body needs someone to look up to. To me, it is my parents." The person was taken aback. Needless to say, I lost out on the interview. But it really didn't matter. In fact I was happy I spoke my mind.

  This reminds me of an incident that took place long long ago. We were school kids then. My Father was a no-nonsense man and a stickler to healthy food. So, all those good looking snacks and fried stuff and chaats from roadside stalls were banned. Once me and my brother went alongwith Dad to his friend's place. While returning back, my brother saw a stall where they were selling the hot bajjis and bondas and masala vadas. He just wouldn't budge from that place and insisted that Dad buy us hot bondaas.  So, my Dad was forced to take us to the stall. He bought some masala vadas, paid and we moved from there. After a few minutes Dad saw that brother had a bonda in his hand. Obviously we hadn't bought it, So, he took us back to the stall to apologise to the vendor.  My brother's face was flustering.  However, the vendor gave my brother 2 more bondas free of cost and was happy Dad took us back all the way to apologise only to teach brother a good lesson.

  Also, I remember my parents always asking us to be truthful . If at all any of us lied, the quantum of punishment would be more.  But we could get away lightly when we spoke the truth :-) .  So there, don't you think our parents are the best role models in life? At least to me they are.

- Tara Shylendra

Wednesday, March 19, 2014

ರಾಜಿ(story)

                                                                        ರಾಜಿ

     ನಗರದ  ಗೌಜು ಗದ್ದಲದಿಂದ, ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯದಿಂದ ಹೊರತಾದ ನಮ್ಮ ಸುಂದರ ಬಡಾವಣೆಯಲ್ಲಿ ಒಂದು ಕೆರೆ ಸಹ ಇದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದೆ . ಬೀದಿಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಮರಗಳಲ್ಲಿ ಕೆಲವು ಕದಂಬ ವೃಕ್ಷ ಗಳೂ ಇದ್ದು, ಅವುಗಳ ಎಲೆ, ಹೂವು, ಕಾಯಿ, ಹಣ್ಣು ಬೀದಿಯಲ್ಲಿ ಬಿದ್ದು, ಓಡಾಡುವವರ ಕಾಲಡಿ ಸಿಕ್ಕಿ , ಅಪ್ಪಚ್ಚಿಯಾಗಿ ನಮ್ಮ ಪಾದರಕ್ಷೆಗಳಿಗೂ ಅಂಟಿ, ಮನೆಯ ಕಾಂಪೌಂಡು ಗಲೀಜಾಗಿ ಅದನ್ನೆಲ್ಲ ತೊಳೆಯುವುದೇ ರೇಜಿಗೆ ಕೆಲಸ . ಇತ್ತೀಚಿಗೆ ಮನೆ ಕಟ್ಟಿ, ಬಣ್ಣ ಬಳಿಸಿದ್ದ ನಮಗೆ ಚಿತ್ರ ವಿಚಿತ್ರ ಚಿತ್ತಾರ ಕಂಡಾಗ ಹೇಗಾಗಿರಬೇಡ?   ರಾತ್ರಿಯ ಹೊತ್ತು ಬಾವಲಿಗಳು ಕದಂಬ ಮರದ ಹಣ್ಣುಗಳನ್ನು ಹೊತ್ತೊಯ್ಯುವಾಗಲೋ ಏನೋ ಗೋಡೆಗಳಿಗೆಲ್ಲ ಅಪ್ಪಳಿಸಿ ಬಿಡಿಸಿದ್ದ ಚಿತ್ತಾರಗಳವು .

      ಹೀಗಿರುವಾಗೊಂದು ದಿನ ಬೀದಿ ಕಸ ಗುಡಿಸಲು ಬರುವ 'ರಾಜಿ' ಯೊಂದಿಗೆ ನನ್ನ ವಾದ ಶುರುವಾಯ್ತು . "ನೀನು ಪ್ರತಿ ದಿನ ಕಸ  ತೊಗೊಂಡು ಹೋದರೆ ನಮಗೆ ಈ ಕಷ್ಟ ಇರೋದೇ ಇಲ್ಲ " ಅಂತ ನಾನು. ಅವಳು "ಇಲ್ಲ ಅಕ್ಕಾ ನಾನೂ ಎಷ್ಟು ಅಂತ ಕಸ ತೆಗೆದು ಹಾಕಲಿ ? ನೀವು ಆ ವಾರ್ಡ್ ಆಫೀಸಿಗೆ ಹೋಗಿ ಹೇಳಿ ಮರ ಕಡಿಸಿ " ಅಂದಳು . ಅಷ್ಟರಲ್ಲಿ ಅಕ್ಕ ಪಕ್ಕದ ಮನೆಯವರೂ ಹೊರಗೆ ಬಂದು ತಲಾ ಒಂದೊಂದು ಡೈಲಾಗ್ ಹೊಡೆದು ಹೋದರು -  "ನೀನು ತಿಂಗಳ ಮೊದಲನೆಯ ದಿನ ದುಡ್ಡು ತೊಗೊಂಡು ಹೋಗೋಕಷ್ಟೇ ಬರ್ತೀಯ ",  "ಪಾಲಿಕೆಯವರು ಸಂಬಳ ಕೊಡಲ್ವ? ಅದರ ಜೊತೆ ನಮ್ಮಿಂದಲೂ ತೊಗೊತೀಯ?", "ಬೆಳಿಗ್ಗೆ ಅದ್ಯಾರದೊ ಮನೆಯಲ್ಲಿ ಕೆಲಸಕ್ಕೆ ಹೋಗ್ತೇಯ. ಅದಕ್ಕೆ, ಇಲ್ಲಿ ಕಸ ತೆಗೆಯೋಕೆ ಬರಲ್ಲ" ಇತ್ಯಾದಿ, ಇತ್ಯಾದಿ . ಅಷ್ಟರಲ್ಲಿ ಇನ್ನೊಂದು ಮನೆಯ ಅಜ್ಜಿ ಹೊರಗೆ ಬಂದು, "ನಿನಗೆ ತಿಂಗಳಿಗೆ ದುಡ್ಡು ಕೊಡೋದೂ ಅಲ್ಲದೆ, ನಿನಗೆ ಊಟ, ತಿಂಡಿ ಬೇರೆ ಕೊಡೋದು ನಾವು .  ನೀನು ನೋಡಿದರೆ ಗುಡಿಸು ಅಂದ್ರೆ ಪೊರಕೆನೂ ನೀವೇ ಕೊಡಿ ಅಂತೀಯ "  ಅನ್ನೋದಾ?

       ಅಲ್ಲಿಂದ ಇಬ್ಬರ ನಡುವಿನಮಾತಿನ ಚಕಮಕಿಗೆ ಸಾಕ್ಷಿಯಾಗಿದ್ದು    ಧನುರ್ಮಾಸದ ಕೊರೆಯುವ ಚಳಿ, ನಾನು ಹಾಗು ನನ್ನ ಕೈಲಿದ್ದ ನಮ್ಮ ಮನೆಯ ಕಸದ ಬುಟ್ಟಿ ಅಷ್ಟೇ . ಕಡೆಗೆ ಅಜ್ಜಿ ವಟಗುಡುತ್ತಾ ಹೊರಟು ಹೋದರು.  ರಾಜಿ ಜಗಳವಾಡಿ ಸಾಕಾಗಿ "ಅಕ್ಕಾ ಗಂಟಲು ಒಣಗಿದೆ . ನೀರು ಕೊಡಿ" ಅಂದಳು . ನೀರಿನ ಜೊತೆ ಒಂದು ಲೋಟ ಕಾಫಿನೂ ಕೊಟ್ಟೆ . ಪುನಃ ಶುರುವಾಯ್ತು ಇವಳ ಪ್ರವರ . "ಅಲ್ಲಾ, ನೀವೇ ಹೇಳಿ . ನೀವು ಎಷ್ಟು ದಿನ ನಂಗೆ ' ಕಾಫಿ ಕುಡೀತೀಯ?'  ಅಂತ ಕೇಳಿಲ್ಲ ? ನಾನೇ ಎಷ್ಟೋ ಸಲ ಬೇಡ ಅಂದಿದ್ದೀನಿ .  ಈ ಮುದುಕಿ ನನ್ನ ಕಸ ತುಂಬುವ ತಳ್ಳುಗಾಡಿಗೆ ಹಾಕೋಕೆ ಅಂತ ಇಟ್ಟಿರೋ ಹಳಸಲು ಅನ್ನವನ್ನು ಕೊಡುತ್ತೆ ನಂಗೆ ತಿನ್ನೋಕೆ. ನಾವು ಇವರ ಕಣ್ಣಿಗೆ ಮನುಷ್ಯರಂಗೆ ಕಾಣ್ಸಲ್ವ?  ನನ್ನ ಹಣೇಬರಾ. ಗಂಡ ನೆಟ್ಟಗಿದ್ರೆ ನಾನ್ಯಾಕೆ ಈ ಕೆಲಸಕ್ಕೆ ಬರಬೇಕಿತ್ತು? ಇರೋ ೨ ಮಕ್ಕಳಾದರೂ ಮುಂದಕ್ಕೆ ಚೆನ್ನಾಗಿರಲಿ ಅಂತ ಓದಿಸ್ತಿದೀನಿ. ತಿಂಗಳಿಗೆ ಸರಿಯಾಗಿ ಆ ಕಂಟ್ರಾಕ್ಟರು ದುಡ್ಡು ಕೊಡಲ್ಲ . ನಮ್ಮ ಹೊಟ್ಟೆ ಪಾಡು ನಡೀಬೇಕಲ್ಲ . ಅದಕ್ಕೆ ಪಕ್ಕದ ಬೀದಿಯಲ್ಲಿ ಒಂದು ಮನೇಲಿ ಕಸ-ಮುಸುರೆ ಕೆಲಸ ಮಾಡ್ತೀನಿ . ಈ ಮುದುಕಿ ನೋಡಿದ್ರೆ ಎನೋ ನಂಗೆ ದಿನಾ ಬಿಸಿ ಬಿಸಿಯಾಗಿ  ಊಟ-ತಿಂಡಿ ಕೊಡೋ ಥರ ಹೇಳುತ್ತೆ " ಅಂತ ಮೂಗೊರೆಸಿಕೊಂಡಳು. ನಾನೂ ಸುಮ್ಮನಿರದೆ "ಮತ್ಯಾಕೆ ಅವರು ಕೊಡೋದನ್ನ ತೊಗೊತೀಯ? ಅಷ್ಟೊಂದು ಸ್ವಾಭಿಮಾನ ಇರೋವ್ಳು ಬೇಡ ಅಂತ ಹೇಳಬೇಕಿತ್ತು " ಅಂದುಬಿಟ್ಟೆ . ಅದನ್ನು ಕೇಳಿ ಅವಳ ಧ್ವನಿ ತಾರಕಕ್ಕೇರಿತು . "ಯಾರಿಗೆ ಬೇಕು ಅವರ ಮನೆ ಅನ್ನ? ನಾಯಿನೂ ಮೂಸಲ್ಲ . ನಾನೇನು ಅವರು ಕೊಟ್ಟಿದ್ದನ್ನ ತಿಂತಿದ್ದೆ ಅಂದ್ಕೊಂಡಿದೀರಾ ? ಕಸದ ಗಾಡಿಗೆ ಹಾಕ್ತಿದ್ದೆ. ಅವರ ಎದುರಿಗೆ ಹಾಕಿದ್ರೆ ಬೇಜಾರಾಗುತ್ತೆ ಅಂತ ಎದುರಿಗೆ ಹಾಕ್ತಿರಲಿಲ್ಲ ಅಷ್ಟೇ " ಅಂದಳು . ನನಗೋ ಮುಜುಗರ . ಯಾಕಾದರೂ ಇವಳ ಜೊತೆ ಬೆಳಿಗ್ಗೆನೇ ಮಾತಿಗೆ ನಿಂತೆ ಅಂತ . ಅಂತೂ ಅವಳನ್ನ ಸಾಗ ಹಾಕಿ ಒಳಗೆ ಬಂದೆ. ನನ್ನ ಪತಿ ದೇವರಿಗೆ ಗಂಗಾವತಿ ಪ್ರಾಣೇಶ್ ಹೇಳುತ್ತಿದ್ದ "ಹೆಂಗಸರೆಲ್ಲ ಬರೀ ಮಾತೇ"  ಜೋಕ್ ನೆನಪಾಗಿ "ಅದೆಷ್ಟು ಮಾತಾಡ್ತೀರಿ ನೀವು ಹೆಂಗಸರು?" ಅಂತ ರೇಗಿಸಿದ್ರು.

     ನಾನು ಆ ಘಟನೆಯನ್ನು ಮರೆತಂತಾಗಿತ್ತು. ಆದರೆ ಹಳೇ ಗಾಯ ಪದೇ ಪದೇ ಕಾಡುವಂತೆ ಇವತ್ತು ಬೆಳಿಗ್ಗೆ ಅದೇ ರಾಜಿ ಬಂದು ನೀರು ಕೇಳಿದಳು .  ನಾನು ಲೋಟದಲ್ಲಿ ನೀರು ಕೊಟ್ಟೆ . ಅವಳು "ಅಕ್ಕಾ ಒಂದು ಚೊಂಬಿನಲ್ಲಿ ಕೊಡಿ ನೀರು. ಯಾಕೋ ತುಂಬಾ ಬಾಯಾರಿಕೆ" ಅಂದಳು . ನಾನು ನೀರು ತೊಗೊಂಡು ಹೊರಗೆ ಹೋಗೋದಕ್ಕೂ , ಜಗಳ ಆಡಿದ ಅಜ್ಜಿ ಕೈಯಲ್ಲಿ ಒಂದು ಪ್ಲಾಸ್ಟಿಕ್ ಚೀಲದ ಒಂದು ತುಂಡಿನ ಮೇಲೆ ಇಡ್ಲಿ, ಚಟ್ನಿ ತಂದು ರಾಜಿಯನ್ನು  ಕರೆಯೋದಕ್ಕೂ ಸರಿ ಹೋಯ್ತು .
 ರಾಜಿ ನೀರು ಕುಡಿದು ಸರ ಸರ ಹೋದಳು . ನಾನು "ಪರವಾಗಿಲ್ಲ , ಇಬ್ಬರಿಗೂ ' ರಾಜಿ ' ಆಗಿದೆ " ಅಂದುಕೊಂಡೆ . ಅಜ್ಜಿ ಕರೆದರು ಅಂತ ಹತ್ತಿರ ಹೋದ ರಾಜಿ ಕೈ ಚಾಚಿದಳು . ನಾನು ಮನಸ್ಸಿನಲ್ಲೇ "ಆ ಅಜ್ಜಿ ಅಷ್ಟೆಲ್ಲ ಮಾತಾಡಿದ್ರೂ, ಅವರು ಕರೆದ ಕೂಡಲೇ ಓಡಿ ಹೋಗ್ತಾಳಲ್ಲ ಇವಳು . ಸ್ವಲ್ಪವೂ ಸ್ವಾಭಿಮಾನ ಇಲ್ಲ ಇವಳಿಗೆ "  ಅಂದುಕೊಳ್ಳುತ್ತಾ ಇರುವಾಗಲೇ , ಬೀದಿಯ ಮೇಲೆ ಏನೋ ಬಿದ್ದ ಸದ್ದಾಯ್ತು .  ನೋಡಿದರೆ ಆ ಅಜ್ಜಿ ಇವಳ ಕೈಗೆ ಪ್ಲಾಸ್ಟಿಕ್ ತುಂಡು ಬೀಳುವಂತೆ ಎಸೆದಂತೆ ಮಾಡಿದ್ದಾರೆ . ರಾಜಿ ಸಿಟ್ಟಿಂದ ಕೈ ಹಿಂತೆಗೆದುಕೊಂಡಿದ್ದಾಳೆ.  ಹಾಗಾಗಿ ಇಡ್ಲಿ, ಚಟ್ನಿ ಬೀದಿ ಪಾಲಾಗಿತ್ತು .
ಅಜ್ಜಿ "ಕೆಳಗೆ ಬೀಳಿಸಿ ಬಿಟ್ಯಾ? ತೆಗೆದು ಹಾಕು . ಅನ್ನ ಅನ್ನಪೂರ್ಣೆ ಗೊತ್ತಾ? ಮಕ್ಕಳು ತುಳಿದಾವು" ಅಂದರು . ಅದಕ್ಕೆ ರಾಜಿಯಾಗದ 'ರಾಜಿ' "ಬೇಕಿದ್ರೆ ನೀವೇ ತೆಗೆದು ಹಾಕಿ . ಇನ್ನು ಮೇಲೆ ಕಸದ ಬುಟ್ಟಿಯನ್ನು ಗಾಡಿ ಹತ್ರ ತಂದು ಕೊಟ್ರೆ ಮಾತ್ರ ಕಸ ತೊಗೊಂಡು ಹೋಗ್ತೀನಿ. ಇಲ್ಲದಿದ್ರೆ ಇಲ್ಲ " ಅಂತ ಖಡಾಖಂಡಿತವಾಗಿ ಹೇಳಿ ಗಾಡಿ ತಳ್ಳಿಕೊಂಡು ಹೋಗೇ ಬಿಟ್ಟಳು .  ಅಜ್ಜಿ ಬೆರಗಾಗಿ ನೋಡುತ್ತಲೇ ನಿಂತಿದ್ದರು .


   -   ತಾರಾ ಶೈಲೇಂದ್ರ

ಬಿನ್ನಹ(poem - save girl child)







                        ಬಿನ್ನಹ

ಅಮ್ಮಾ ಬೆಚ್ಚಗಿರುವೆ ನಾ ನಿನ್ನುದರದಲಿ
ಕಾಯುತ್ತಿರುವೆ ಬರಲು ಈ ಧರೆಯಲಿ
ಎಷ್ಟೋ ಕನಸುಗಳಿವೆ ನಿನ್ನಂತೆ ನನಗೂ
ನೋಡಬೇಕಿದೆ ನಾ ಭುವಿಯ ಸೊಬಗು
ಅಣ್ಣನಂತೆ ನನಗೂ ಓದುವ ಆಸೆ
"ಹೆಣ್ಣು"  ಆದರೇನು? ಆಗಸದಿ ಹಾರುವಾಸೆ
ನಿನ್ನಂತೆ ಆಗುವೆ ನಾನೂ ಜಾಣೆ
ಕಾಡುವುದಿಲ್ಲ ನಿನ್ನ ನನ್ನಾಣೆ
ಅಪ್ಪನಂತೆ ಗಳಿಸುವೆ ಸಮಾಜದಿ ಹೆಸರು
ನಾನಾಗುವೆ ನಿಮ್ಮೆಲ್ಲರ ಉಸಿರು
ನಿಮ್ಮ ಮುಪ್ಪಿನಲಿ ನಾನೇ ಊರುಗೋಲು
ಅನುಭವಿಸಲು ಬಿಡೆ ಯಾವುದೇ ಸೋಲು
ಆದರೆ......
ಇವೆಲ್ಲ ನನಸಾಗಬಹುದೇ ಅಮ್ಮಾ?
ನೀಡುವೆಯಾನೇನು ನನಗೆ ಜನ್ಮ ?
ಆ ದೇವರಲ್ಲಿ ನನ್ನ ಬಿನ್ನಹ
ಅನುಗಾಲ ನಾನಿರಬೇಕು ನಿನ್ನ ಸನಿಹ
ನೀಡದಿರಲಿ ನನಗೆ ಅಕಾಲ ಮರಣ
ಭೂಮಿಗೆ ಬರಲು ನನಗಿದೆ ಸಕಾರಣ

- ತಾರಾ ಶೈಲೇಂದ್ರ
http://taraantaranga.blogspot.in

                     

 

Tuesday, March 18, 2014

ಕುರುಡರು (poem)

ಕುರುಡರು


ಕಾರಿರುಳ ಕಂಡಂತೆ
ಬೆಚ್ಚುವ ಜನರಿವರು
ಬಿಳಿಯ ತೊಗಲ
ಪೂಜಿಸುವವರು
ನೇರಳೆಯ ಸವಿಯ
ಕಾಣದ ಹುಂಬರಿವರು
ಅತ್ತಿಯ ಹಣ್ಣನು
ಬಿಚ್ಚದೆ ನುಂಗುವವರು
ಇಳೆಗೆ ಮಳೆಯ
ತಂದರೂ ಕರಿ ಮೋಡ
ಜನಕೆ ಚಂದ
ಬಿಳಿಯ ಮೋಡ
ಬಾಹ್ಯ ಸೌಂದರ್ಯಕ್ಕೆ
ಮನಸೋಲುವವರು ಇವರು
ಹೃದಯ ಶ್ರೀಮಂತಿಕೆಯ ಕಾಣದ
ಹಗಲು ಕುರುಡರು
- ತಾರಾ ಶೈಲೇಂದ್ರ